18/2/18

ಜಸ್ಟ್ ಮಾತ್ ಮಾತಲ್ಲಿ

ಮೌನದ ಕವಿತೆ ಹಾಡಾಗಿ ಹರಿದು ‌‌
ಕಣ್ಣೀರ ಕಡಲಾಗಿದೆ
ಪ್ರೀತಿಯ ನೌಕೆ ದೀಪದ ಮನೆಯ 
ಹುಡುಕಾಡಿ ಅಲೆದಾಡಿದೆ|

ಸೆಳೆವಾ ಅಲೆಗೆ, ತೀರಾ ದೂರ

ಇದು ಒಲವೋ ಭ್ರಮೆಯೋ,
ಎಳೆಮನದ ಸೋಲೋ? 
ಇದು ನನ್ನ ಉಸಿರಾ ಗಾನ
ಜಸ್ಟ್ ಮಾತ್ ಮಾತಲ್ಲಿ!

ಮಸುಕು ದೂರಾಗಿ ಬೆಳಗಾಗಿದೆ, 
ಜಗದ ಕತ್ತಲೆಯೂ ಸರಿದಾಡಿದೆ,
ತೀರದಿಂದ ನೌಕೆಯೂ ದೂರವಾಗಿದೆ, 
ತನ್ನ ನೆಂದ ಹಾಯಿಯ ಬಾನಿಗೊಡ್ಡಿದೆ, 
ಎದೆಯಾ ಕಾರ್ಮೋಡ ಮಳೆಯಾಗಿದೆ..

ಇದು ‌ಮಳೆಯೋ ಮರುಳೋ, 
ಕಂಬನಿಯಾ ಸೆಲೆಯೋ,
ಇದು ನನ್ನ ಒಲವಾ ಪಯಣ
ಜಸ್ಟ್ ಮಾತಮಾತಲ್ಲಿ