15/4/12

ಹೀಗೊಂದು ವೃತ್ತಿಪರತೆ!

ಭಾರತ ಸ್ವತಂತ್ರಗೊಂಡ ಕೆಲವೇ ದಿನಗಳಲ್ಲಿ ಭಾರತದ ಮೊದಲ ಆರ್ಮಿ ಜನರಲ್ ರನ್ನು ಆಯ್ಕೆಮಾಡಲು ಸಭೆ ಆಯೋಜನೆ ಗೊಂಡಿತ್ತು. ಆ ಸಭೆಯ ಅಧ್ಯಕ್ಷತೆಯನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ವಹಿಸಿದ್ದರು. ಯಾರನ್ನು ಈ ಹುದ್ದೆಗೆ ಆಯ್ಕೆ ಮಾಡಬೇಕೆಂಬ ಬಗ್ಗೆ ನಾಯಕರು ಹಾಗೂ ಸೇನಾಧಿಕಾರಿಗಳ ನಡುವೆ ಚರ್ಚೆ ನಡೆಯುತ್ತಿತ್ತು. ಈ ನಡುವೆ ನೆಹರು " ನಾವು ಈ ಹುದ್ದೆಗೆ ಯಾರಾದರು ಬ್ರೀಟಿಶ್ ಅಧಿಕಾರಿಯನ್ನು ನೇಮಿಸುವುದು ಸೂಕ್ತ. ನಮ್ಮಲ್ಲಿ ಈ ಹುದ್ದೆಯನ್ನು ನಿರ್ವಹಿಸುವಷ್ಟು ಅನುಭವ ಹೊಂದಿದವರು ಇಲ್ಲ" ಎಂಬ ಅಭಿಪ್ರಾಯವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ಎಲ್ಲ ನಾಯಕರು ಸಹ ಇದಕ್ಕೆ ಸಮ್ಮತಿಯನ್ನು ವ್ಯಕ್ತಪಡಿಸಿದರು. ಆಗ ಒಬ್ಬ ಸೇನಾ ಅಧಿಕಾರಿ "ಸರ್,  ನನ್ನದೊಂದು ಮಾತು. ಹೇಳಲೇ?" ಎಂದು ಕೇಳಿದರು.ನೆಹರು "ಹೇಳಬಹುದು" ಎಂದರು. ತಕ್ಷಣ ಆ ಅಧಿಕಾರಿ " ಸಾರ್, ನಮಗೆ ರಾಷ್ಟ್ರವನ್ನು ಮುನ್ನಡೆಸಿ ಅನುಭವವಿಲ್ಲ.ಆಗಾಗಿ ನಾವು ಒಬ್ಬ ಬ್ರಿಟೀಶ್ ವ್ಯಕ್ತಿಯನ್ನು ನಮ್ಮ ಮೊದಲ ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಬಹುದಲ್ಲವೇ?" ಎಂದು ಕೇಳಿಯೇ ಬಿಟ್ಟರು.ಈಡೀ ಸಭೆ ಒಂದಷ್ಟುಕಾಲ ಮೌನವಾಗಿತ್ತು. ಸ್ವಲ್ಪ ಹೊತ್ತಿನ ನಂತರ ನೆಹರು ಆ ಅಧಿಕಾರಿಯನ್ನು ಕೇಳಿದರು "ನೀವು ಭಾರತದ ಮೊದಲ ಆರ್ಮಿ ಜನರಲ್ ಆಗಲು ತಯಾರಿದ್ದೀರಾ?". ಅದು ಒಬ್ಬ ಸೇನಾ ಅಧಿಕಾರಿಗೆ ಜೀವನದಲ್ಲಿ ಒಮ್ಮೆ ಸಿಗುವ ಅವಕಾಶ. ಆದರೆ ಆ ಅಧಿಕಾರಿ  "ಇಲ್ಲಾ ಸರ್. ನಮ್ಮ ಸೇನೆಯಲ್ಲಿ ಅತ್ಯಂತ ಪ್ರತಿಭಾವಂತ ಹಾಗೂ ಎಲ್ಲರಿಗಿಂತ ಅನುಭವಿ ಅಧಿಕಾರಿ ಇದ್ದಾರೆ. ಅವರ ಹೆಸರು Lt.ಜನರಲ್  ಕಾರ್ಯಪ್ಪ.ಅವರು ನಮ್ಮೆಲ್ಲರಿಗಿಂತಲೂ ಈ ಹುದ್ದೆಗೆ ಅರ್ಹ ವ್ಯಕ್ತಿ" ಎಂದು ಹೇಳಿದರು. ನಂತರ ಕಾರ್ಯಪ್ಪ ಸ್ವಂತಂತ್ರ ಭಾರತದ ಮೊದಲ ಸೇನಾ ದಂಡನಾಯಕರಾದರು.
 ಅಂದು ಸ್ವತಂತ್ರ ಭಾರತದ ಮೊದಲ ಸೇನಾ ದಂಡನಾಯಕ ಭಾರತೀಯನೇ ಆಗಬೇಕೆಂದು ನೆಹರು ವಿರುದ್ದ ಮಾತನಾಡಿದ ಹಾಗೂ ತನಗೆ ಸಿಗಲಿದ್ದ ಹುದ್ದೆಯನ್ನು ತನಗಿಂತ ಅನುಭವಿಯಾದ ಸಹೋದ್ಯೋಗಿಗೆ ಕೊಡುವಂತೆ ಕೇಳಿದ ಆ ಅಧಿಕಾರಿ ಸ್ವತಂತ್ರ ಭಾರತದ ಮೊದಲ Lt. ಜನರಲ್ ನಾಥೂ ಸಿಂಗ್ ರಾಥೋರ್. ಇದಕ್ಕೇ ಅಲ್ಲವೇ ವೃತ್ತಿಪರತೆ ಎಂದು ಕರೆಯುವುದು! ಇಂತಹ ಅಧಿಕಾರಿಗಳಿಂದಲೇ ಭಾರತ ಸೇನೆ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವುದು. ನೆಹರು, ಸರ್ದಾರ್ ಪಟೇಲರನ್ನು ಹಿಂದೂಡಿ ನಮ್ಮ ಮೊದಲ ಪ್ರಧಾನಿಯಾದರು. ಆದರೆ Lt. ಜನರಲ್ ನಾಥೂ ಸಿಂಗ್ ರಾಥೋರ್ ಅಂತಹ ಕೆಲಸವನ್ನು ಮಾಡಲಿಲ್ಲ. ಭಾರತೀಯ ಸೇನೆಯ ವೃತ್ತಿಪರತೆ ಹಾಗು ಶಿಸ್ತು ಅಂತಹದ್ದು. ಅಂದು ಅವರು ನಮ್ಮ ಸೇನೆಯ ಗೌರವವನ್ನು ಮುಗಿಲೆತ್ತರಕ್ಕೆ ಏರಿಸಿದ್ದರು.